ಅರಿವಿಲ್ಲದೇ ಅಡಗಿತ್ತು ನನ್ನೊಳೊಂದು ಮನಸು,
ಕಾತುರದಿ ಕಾದಿಹುದು ತಿಳಿಯಲು ತನ್ನೊಲವ ಕುರಿತು;
ಎದುರಾದೆ ನೀ ಅದಕೆ ಎಂದೋ ಹೀಗೊಮ್ಮೆ,
ತುಡಿಯುತಿದೆ ನಿನಗಾಗಿ ಪ್ರತಿ ಘಳಿಗೆಗೊಮ್ಮೆ.
ನೀನಾದೆ ಅಲ್ಲಿರುವ ಭಾವನೆಗೆ ಸ್ಫೂರ್ತಿ,
ದಿಕ್ಕು ತೋಚದ ಕ್ಷಣಕೆ ಮಾರ್ಗದರ್ಶಕನ ರೀತಿ;
ನೋಡದೆಯೇ, ಕೇಳದೆಯೇ ಅವಲಂಬಿಸಿಹೆ ನಿನ್ನನೇ,
ಸ್ಥಿಮಿತವಿಲ್ಲದೇ ನಡೆದೆ ನಿನ್ನನರಸಿ ಸುಮ್ಮನೆ.
ನಿನ್ನ ದಿಟ್ಟಿಸಿದರೆ ಸಿಗುವುದಿದೊಂದೇ ರೂಪ,
ಅದ ನಾನು ಭ್ರಮಿಸಿದುದು ಕೇವಲ ಕುರೂಪ;
ನನ್ನ ನಾ ಕಂಡುಕೊಳ್ಳಲು ನೀನಾದೆ ಪ್ರೇರಣೆ,
ನನ್ನೊಲವ ಕನ್ನಡಿಯೇ ನಿನಗೆ ವಂದನಾರ್ಪಣೆ.
-ಅನಿತ
08-07-2015
Hmm Chennagide kannadiya aaradhane :_)
ReplyDeleteThank you :) Looks like, finally the comment problem is fixed.
DeleteAdakkintha ashcharya andre nanna tab inda comment madakke sadhya agiddu. Hosa mobilenalli Google+ visit madi allina link moolaka kannada fontna baraha odiddu innoo dodda sahasa.
ReplyDeleteYeaayyy :)
Deletechennagide :)
ReplyDeleteDhanyavaadagaLu :D
Delete